LG ಕಂಪನಿಯ ಸ್ಮಾರ್ಟ್‌ ಟಿವಿಗಳಿಗೆ ಮಾರುಕಟ್ಟೆಯಲ್ಲಿ ಸಖತ್ ಡಿಮ್ಯಾಂಡ್‌ ಇದೆ. ಸದ್ಯ ನೀವೇನಾದರೂ ಡಿಸ್ಕೌಂಟ್‌ ಬೆಲೆಯಲ್ಲಿ ಹೊಸದೊಂದು ಸ್ಮಾರ್ಟ್‌ ಟಿವಿ ಖರೀದಿಸಲು ಬಯಸಿದರೆ ನಿಮಗೆ ಇಲ್ಲಿದೆ ಸಿಹಿಸುದ್ದಿ. ಹೌದು, ಜನಪ್ರಿಯ ಇ ಕಾಮರ್ಸ್‌ Amazon ತಾಣದಲ್ಲಿ ಎಲ್‌ಜಿ ಸಂಸ್ಥೆಯ 55 ಇಂಚಿನ AI ಸರಣಿ 4K ಅಲ್ಟ್ರಾ HD ಸ್ಮಾರ್ಟ್ ಟಿವಿ ಬೊಂಬಾಟ್‌ ರಿಯಾಯಿತಿ ದರದಲ್ಲಿ ಲಭ್ಯ ಇದೆ. ಖರೀದಿದಾರರು ಬ್ಯಾಂಕ್‌ ಆಫರ್‌ಗಳ ಮೂಲಕ ಹೆಚ್ಚುವರಿ ಡಿಸ್ಕೌಂಟ್‌ ಸಹ ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್‌ ಟಿವಿಯು ಡಾಲ್ಬಿ ಅಟ್ಮಾಸ್ ಸೌಂಡ್‌ ಸಪೋರ್ಟ್‌ ಜೊತೆಗೆ 20W ಔಟ್‌ಪುಟ್‌ ಸೌಂಡ್‌ ವ್ಯವಸ್ಥೆಯನ್ನು ಒಳಗೊಂಡಿದೆ. ಇನ್ನುಳಿದಂತೆ ಎಲ್‌ಜಿ ಯ ಈ ಸ್ಮಾರ್ಟ್‌ ಟಿವಿಗೆ ಅಮೆಜಾನ್‌ ತಾಣದಲ್ಲಿ ಲಭ್ಯವಿರುವ ಕೊಡುಗೆ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ. Survey Thank you for completing the survey!

Also Read : ಮಾರುಕಟ್ಟೆಗೆ ಬರಲು ಸಿದ್ಧವಾಗಿ Vivo X300 FE ಮೊಬೈಲ್‌! ಈ ದಿನದಂದು ಬಿಡುಗಡೆ LG ಕಂಪನಿಯ 55 ಇಂಚಿನ ಸ್ಮಾರ್ಟ್‌ಟಿವಿಗೆ ಡಿಸ್ಕೌಂಟ್‌ ಎಲ್‌ಜಿ ಸಂಸ್ಥೆಯ UA82 AI ಸರಣಿಯ 55 ಇಂಚಿನ 4K Ultra HD ಸ್ಮಾರ್ಟ್ ಟಿವಿ ಆಕರ್ಷಕ ಬೆಲೆ ಇಳಿಕೆ ಪಡೆದಿದೆ. Amazon ತಾಣದಲ್ಲಿ ಈ ಸ್ಮಾರ್ಟ್‌ ಟಿವಿಯ ಮೂಲ ಬೆಲೆ 66,290 ರೂಗಳು ಆಗಿದ್ದು ಸದ್ಯ 40,990 ರೂಗಳ ಆಫರ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಇದಲ್ಲದೇ ಆಸಕ್ತ ಗ್ರಾಹಕರು ಆಯ್ದ ಬ್ಯಾಂಕ್‌ಗಳ ಮೂಲಕ ಖರೀದಿಸಿದರೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದಾಗಿದೆ. ಈ ಸ್ಮಾರ್ಟ್‌ಟಿವಿಯ ಪ್ರಮುಖ ಫೀಚರ್ಸ್‌ ಎಲ್‌ಜಿ ಸಂಸ್ಥೆಯ ಈ ಸ್ಮಾರ್ಟ್‌ಟಿವಿಯು 55 ಇಂಚಿನ 4K Ultra HD ಸ್ಕ್ರೀನ್‌ ಅನ್ನು ಪಡೆದಿದೆ. ಈ ಟಿವಿ ಸ್ಕ್ರೀನ್‌ 3,840 x 2,160 ಪಿಕ್ಸಲ್‌ ರೆಸಲ್ಯೂಶನ್‌ ಜೊತೆಗೆ 4K ಸೂಪರ್ ಅಪ್‌ಸ್ಕೇಲಿಂಗ್ ಸಪೋರ್ಟ್‌ ಹೊಂದಿದೆ. ಹಾಗೆಯೇ ಇದು HDR10+ ಸಪೋರ್ಟ್‌, ಫಿಲ್ಮ್‌ಮೇಕರ್ ಮೋಡ್ ಗಳಂತಹ ಆಯ್ಕೆಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ ಟಿವಿಯು ಅಲ್ಫಾ 7 AI ಪ್ರೊಸೆಸರ್ 4K Gen8 ಪ್ರೊಸೆಸರ್‌ ಸೌಲಭ್ಯ ಒಳಗೊಂಡಿದೆ ಹಾಗೂ ಇಂಟೆಲಿಜೆಂಟ್ ವಾಯ್ಸ್ ರೆಕಗ್ನಿಷನ್, AI ಚಾಟ್‌ಬಾಟ್, ಗೂಗಲ್‌ ಹೋಮ್‌, ಆಪಲ್‌ ಏರ್‌ಪ್ಲೇ ಸೌಲಭ್ಯಗಳನ್ನು ಪಡೆದುಕೊಂಡಿದೆ. ಸ್ಥಿರ ವೈರ್ಡ್ ಇಂಟರ್ನೆಟ್‌ಗಾಗಿ ಈಥರ್ನೆಟ್ ಇನ್‌ಪುಟ್‌ ಜೊತೆಗೆ ವೈ-ಫೈ, ಬ್ಲೂಟೂತ್ 5.0, ಮತ್ತು 3 HDMI ಪೋರ್ಟ್‌ ಆಯ್ಕೆಗಳನ್ನು ಪಡೆದಿದೆ. ಈ ಸ್ಮಾರ್ಟ್‌ ಟಿವಿಯು ಅಮೆಜಾನ್‌ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಸೋನಿ ಲೈವ್, ಜಿಯೋಹಾಟ್‌ಸ್ಟಾರ್, ಸನ್‌ನೆಕ್ಸ್ಟ್‌, Zee5 ಸೇರಿದಂತೆ ಮ್ಯೂಸಿಕ್‌ ಚಾನೆಲ್‌ಗಳ ಸಪೋರ್ಟ್‌ ಸಹ ಹೊಂದಿದೆ. ಇನ್ನು ಈ ಟಿವಿಯ ಸೌಂಡ್‌ ಸಹ ಅತ್ಯುತ್ತಮವಾಗಿದ್ದು ಇದು 20 W ವಾಯ್ಸ್‌ ಔಟ್‌ಪುಟ್ ಒಳಗೊಂಡಿದೆ. ಹಾಗೆಯೇ ಹಾರ್ಡ್ ಡ್ರೈವ್‌ಗಳು ಮತ್ತು ಇತರ USB ಡಿವೈಸ್‌ಗಳನ್ನು ಕನೆಕ್ಟ್‌ ಮಾಡಲು 1 USB ಪೋರ್ಟ್‌ಗಳು ವ್ಯವಸ್ಥೆ ಹೊಂದಿದೆ. ಅಲ್ಲದೇ ಇದು 2 GB RAM ಜೊತೆಗೆ 8 GB ROM ಆಯ್ಕೆ ಒಳಗೊಂಡಿದೆ. Disclosure: This Article Contains Affiliate Links