ಜನಪ್ರಿಯ ರಿಲಯನ್ಸ್ Jio ಟೆಲಿಕಾಂ ಭಿನ್ನ ಬೆಲೆಯ ರೀಚಾರ್ಜ್ ಯೋಜನೆಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಜಿಯೋದ ರೀಚಾರ್ಜ್ ಆಯ್ಕೆಗಳ ಲಿಸ್ಟ್‌ನಲ್ಲಿ ಬಜೆಟ್ ಬೆಲೆಯಲ್ಲಿ ಅಧಿಕ ಡೇಟಾ ಸೌಲಭ್ಯ ಪಡೆದ ಪ್ಲಾನ್‌ಗಳು ಸೇರಿವೆ. ಅದಾಗ್ಯೂ, ಅಗ್ಗದ ಬೆಲೆಯಲ್ಲಿ ಹೆಚ್ಚಿನ ವ್ಯಾಲಿಡಿಟಿ ಜೊತೆಗೆ ನಿಗದಿತ ಡೇಟಾ ಪ್ರಯೋಜನ ನೀಡುವ ರೀಚಾರ್ಜ್ ಯೋಜನೆಗಳು ಆಕರ್ಷಕವಾಗಿ ಗುರುತಿಸಿಕೊಂಡಿವೆ. ಆ ಪೈಕಿ ಜಿಯೋ ಟೆಲಿಕಾಂನ 195 ರೂ.ಗಳ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆ ಅಗ್ಗದ ದರದ ಮೂಲಕ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದೆ. ಈ ಅಗ್ಗದ ಬೆಲೆಯ ಯೋಜನೆಯು ಡೇಟಾ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ 30 ದಿನಗಳ ವ್ಯಾಲಿಡಿಟಿ ಹಾಗೂ OTT ಸಹ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 195 ರೂ.ಗಳ ಪ್ಲಾನ್ ಹಾಗೂ ಇತರೆ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ. Survey Thank you for completing the survey! Also Read : RBI New Rule: OTP ಇಲ್ಲದೆ ಬಿಲ್ ಪಾವತಿ ಸಾಧ್ಯ! ಚಂದಾದಾರಿಕೆಗಳ ಬಿಲ್ ಪಾವತಿಗೆ ಹೊಸ ವ್ಯವಸ್ಥೆ Jio ಟೆಲಿಕಾಂನ 195 ರೂ.ಗಳ ಯೋಜನೆಯ ಮಾಹಿತಿ ಜಿಯೋ ಟೆಲಿಕಾಂನ 195 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 15GB ಡೇಟಾ ಪ್ರಯೋಜನ ಸಿಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ ಜಿಯೋ ಹಾಟ್‌ಸ್ಟಾರ್ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್ ಪ್ಲಾನ್ ಕ್ರಿಕೆಟ್ ಡೇಟಾ ಪ್ಯಾಕ್ ಆಗಿದ್ದು, ಇದರಲ್ಲಿ ವಾಯ್ಸ್ ಕರೆ ಹಾಗೂ ಎಸ್‌ಎಮ್ಎಸ್ ಸೌಲಭ್ಯ ಲಭ್ಯವಿರುವುದಿಲ್ಲ. ಕ್ರಿಕೆಟ್ ಡೇಟಾ ಪ್ಯಾಕ್‌ಗಳ ಮಾಹಿತಿ ಜಿಯೋ ಟೆಲಿಕಾಂನ 149 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 10GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯಲ್ಲಿ ಜಿಯೋ ಹಾಟ್‌ಸ್ಟಾರ್ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್ ಪ್ಲಾನ್ ಕ್ರಿಕೆಟ್ ಡೇಟಾ ಪ್ಯಾಕ್ ಆಗಿದ್ದು, ಇದರಲ್ಲಿ ವಾಯ್ಸ್ ಕರೆ ಹಾಗೂ ಎಸ್‌ಎಮ್ಎಸ್ ಸೌಲಭ್ಯ ದೊರೆಯುವುದಿಲ್ಲ. ಜಿಯೋ ಟೆಲಿಕಾಂನ 100 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 6GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯಲ್ಲಿ ಜಿಯೋ ಹಾಟ್‌ಸ್ಟಾರ್ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್ ಪ್ಲಾನ್ ಕ್ರಿಕೆಟ್ ಡೇಟಾ ಪ್ಯಾಕ್ ಆಗಿದೆ. ಹೀಗಾಗಿ ಈ ಪ್ಲಾನಿನಲ್ಲಿ ವಾಯ್ಸ್ ಕರೆ ಹಾಗೂ ಎಸ್‌ಎಮ್ಎಸ್ ಸೌಲಭ್ಯ ದೊರೆಯುವುದಿಲ್ಲ. ಜಿಯೋ ಟೆಲಿಕಾಂನ 79 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 30 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯಲ್ಲಿ ಜಿಯೋ ಹಾಟ್‌ಸ್ಟಾರ್ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ರೀಚಾರ್ಜ್ ಪ್ಲಾನ್ ಕ್ರಿಕೆಟ್ ಡೇಟಾ ಪ್ಯಾಕ್ ಆಗಿದೆ. ಹೀಗಾಗಿ ಈ ಪ್ಲಾನಿನಲ್ಲಿ ವಾಯ್ಸ್ ಕರೆ ಹಾಗೂ ಎಸ್‌ಎಮ್ಎಸ್ ಸೌಲಭ್ಯ ದೊರೆಯುವುದಿಲ್ಲ.

Jio 195 ರೂ.ಗಳ ಯೋಜನೆಯಲ್ಲಿ ಡೇಟಾ ಸೌಲಭ್ಯದ ಜೊತೆಗೆ 30 ದಿನಗಳ ವ್ಯಾಲಿಡಿಟಿ ಖಚಿತ!
Manthesh B·Digit.in India··2 min read
D
Continue reading on Digit.in India
This article was sourced from Digit.in India's RSS feed. Visit the original for the complete story.